Photos : ಪ್ರಿಯಾ-ಸುದೀಪ್‌ 25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ!

Photos  ಕಿಚ್ಚ ಸುದೀಪ್–ಪ್ರಿಯಾ 25ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಯಾರೆಲ್ಲ ಬಂದಿದ್ದರು?

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಅವರು ಇಂದು ಅಕ್ಟೋಬರ್ 18ರಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇವರ ದಾಂಪತ್ಯ ಜೀವನಕ್ಕೆ 25 ವರ್ಷಗಳ ಸಡಗರ. ದಂಪತಿ ಮನೆಯಲ್ಲಿ ವಿಶೇಷವಾದ ಪೂಜೆ, ಹೋಮ ಮತ್ತು ಕೆಲವು ಮದುವೆ ಶಾಸ್ತ್ರಗಳು ಜರುಗಿವೆ. ಆ ಸುಂದರ ಕ್ಷಣಗಳು ಇಲ್ಲಿವೆ

ಪ್ರಿಯಾ ಕೊಟ್ಟ ಪ್ರೀತಿಯ ಸಂಕೇತ ಇವತ್ತಿಗೂ ಕಾಪಾಡಿದ್ದಾರೆ ಸುದೀಪ್‌!

ಸುದೀಪ್ ಮತ್ತು ಪ್ರಿಯಾ ದಂಪತಿಯ ವಿವಾಹ ವಾರ್ಷಿಕೋತ್ಸವ. ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಇಂದು ಅಕ್ಟೋಬರ್ 18 ರಂದು ಕುಟುಂಬ ಆಚರಿಸಿದೆ.

 

ಕಿಚ್ಚ ಸುದೀಪ್ ಮತ್ತು ಪ್ರಿಯಾ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಪರಸ್ಪರ ಪ್ರೀತಿಸುತ್ತಿದ್ದ ಪ್ರಿಯಾ ಮತ್ತು ಸುದೀಪ್ 2001ರ ಅಕ್ಟೋಬರ್ 18 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇಂದಿಗೆ ಸರಿಯಾಗಿ 25 ವರ್ಷಗಳು ತುಂಬಿವೆ.

 

ಪ್ರಿಯಾ ಮೂಲತಃ ಕೇರಳ ರಾಜ್ಯದವರು. 2000 ಇಸಿವಿಯಲ್ಲಿ ಪ್ರಿಯಾ ಅವರು ಬೆಂಗಳೂರಿನ ಕೆನರಾ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಸ್ಯಾಲರಿಯಲ್ಲಿ ಸುದೀಪ್‌ ಅವರ ಕೇರಿಯರ್‌ಗೂ ಹೆಲ್ಪ್‌ ಮಾಡಿದ್ದಾರೆ. ಆಗ ಅವರು ಬಳಸುತ್ತಿದ್ದ ಪ್ರೀತಿಯ ಸಂಕೇತವಾದ ಟುವ್ಹೀಲರ್‌ ಇವತ್ತಿಗೂ ಕಂಡಿಷನ್‌ನಲ್ಲಿ ಕಾಪಾಡಿಕೊಂಡು ಬಂದಿದ್ದಾರೆ ಸುದೀಪ್‌.

 

ಮದುವೆಯಾದ ನಂತರ ಸಾಕಷ್ಟು ಏಳುಬೀಳು ಕಂಡರೂ ಪರಸ್ಪರ ಬಿಟ್ಟುಕೊಡದೇ 25 ವರ್ಷದ ತುಂಬು ದಾಂಪತ್ಯ ಕಳೆದಿದ್ದಾರೆ. ದಂಪತಿಗೆ 2004ರಲ್ಲಿ ಮುದ್ದಿನ ಮಗಳು ಸಾನ್ವಿ ಜನಿಸಿದರು.

ಕ್ಯೂಟ್‌ ಕ್ಷಣ

ಹಾರ ಬದಲಾಯಿಸಿಕೊಂಡು, ಸುದೀಪ್‌ ಅವರ ತೊಡೆಯ ಮೇಲೆ ಕೂಳಿತುಕೊಂಡ ಪ್ರಿಯಾ ಅವರ ಕ್ಯೂಟ್‌ ಪಟ.

ಕಾರ್ತಿಕ್‌ ಜಯರಾಮ್‌

ಪ್ರಿಯಾ ಅತ್ತಿಗೆ ಅಂತ ಕರೆಯುವ ಕಿಚ್ಚ ಸುದೀಪ್‌ ಅವರ ಆಪ್ತ ಬಳಗದಲ್ಲಿರುವ ನಟ ಕಾರ್ತಿಕ್‌ ಜಯರಾಮ್‌ ಅಂದ್ರೆ ಜೆಕೆ.

ಹಾರ ಬದಲಿಸುವ ಕ್ಷಣ

ಸರಳ ಮದುವೆ ಶಾಸ್ತ್ರದ ರೀತಿಯಲ್ಲಿ ಪ್ರಿಯಾ ಮತ್ತು ಕಿಚ್ಚ ಸುದೀಪ್‌ ಅವರು ಹಾರ ಬದಲಿಸಿಕೊಂಡಿದ್ದಾರೆ.

ಸಾಂಪ್ರದಾಯಿಕ ಉಡುಗೆ

ಸದಾ ಸೂಟು, ಬೂಟು ಹಾಕೊಂಡು ಡ್ಯಾಶಿಂಗ್‌ ಆಗಿ ಕಾಣುವ ಕಿಚ್ಚ ಸುದೀಪ್‌ ಅವರು ರೇಷ್ಮೆ ಪಂಚೆ-ಶರ್ಟ್‌ನಲ್ಲಿ ನವ ವರನಂತೆ ಮಿಂಚುತ್ತಿದ್ದರು.

ಹಾರ ಹಾಕಲ್ಲ

ಪ್ರಿಯಾ ಸುದೀಪ್‌ ಅವರು ಹಾರ ಬದಲಿಸುವ ಸಮಯದಲ್ಲಿ ನಾನು ಮೊದಲು ಹಾರ ಹಾಕಲ್ಲ, ನೀವೇ ಹಾಕಿ ಎಂದು ಕಿಚ್ಚನನ್ನ ಸತಾಯಿಸುತ್ತಿದ್ದರು. ನಂತರ ಶಾಸ್ತಿಗಳು ಹೇಳಿದ ಮೇಲೆ ಹಾರ ಹಾಕಿ, ನಾಚಿ ನೀರಾದ ಕ್ಷಣ.

ಗೆಳೆಯನಿಗೆ ವಿಶ್‌

ಕಿಚ್ಚ ಸುದೀಪ್‌ ಅವರ ಬಳಗದಲ್ಲಿರುವ ಸ್ನೇಹಿತ ಬಿಗ್‌ ಬಾಸ್‌ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್‌ ಅವರು ವಿಶ್‌ ಮಾಡಿದ ಕ್ಷಣ.

ಮಾಜಿ ಕ್ರಿಕೆಟಿಗ

ಕಿಚ್ಚ ಸುದೀಪ್ ದಂಪತಿ ಜೊತೆಗೆ ಮಾಜಿ ಭಾರತೀಯ ಕ್ರಿಕೆಟಿಗ ಮತ್ತು ಕನ್ನಡಿಗ ವೆಂಕಟೇಶ್ ಪ್ರಸಾದ್ ದಂಪತಿ.

ಸುಮಲತಾ ಅಂಬರೀಶ್‌

ಸುಮಲತಾ ಅಂಬರೀಶ್‌ ಮತ್ತು ಗಾಯಕ ವಿಜಯ್‌ ಪ್ರಕಾಶ್ ಅವರು ವಿಶ್‌ ಮಾಡಿದ ಕ್ಷಣ.

ಪ್ರದೀಪ್ ಕುಟುಂಬ

ಕಿಚ್ಚ ಸುದೀಪ್‌ ದಂಪತಿ ಜೊತೆಗೆ ‘ಜಾಲಿ ಡೇಸ್‌’ ಸಿನಿಮಾ ಖ್ಯಾತಿಯ ನಟ ಪ್ರದೀಪ್‌ ಕುಟಂಬ.

ಜೋಡಿ

ಕಿಚ್ಚ ಸುದೀಪ್ ದಂಪತಿ ಜೊತೆಗೆ ನಟ ಕಾರ್ತಿಕ್ ಜಯರಾಮ್(ಜೆಕೆ) ಅವರ ಗರ್ಲ್‌ಫ್ರೆಂಡ್ ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ.

ರಾಜೀವ್‌ ದಂಪತಿ

‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಜನಪ್ರಿಯ ಸ್ಪರ್ಧಿಯಾಗಿ ಹೆಚ್ಚು ಪ್ರಸಿದ್ಧಿ ಪಡೆದಿದ್ದ ರಾಜೀವ್ ಹನು ಮತ್ತು ಪತ್ನಿ ರೇಷ್ಮಾ ದಂಪತಿ.

Read More:

ಸ್ಯಾಂಡಲ್‌ವುಡ್‌ನ ಇತ್ತೀಚಿನ ಸಿನಿಮಾ ಸುದ್ದಿಗಳು ಮತ್ತು ನಟ-ನಟಿಯರ ವಿಶೇಷ ಕ್ಷಣಗಳಿಗಾಗಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ.

Leave a Comment